ಸ್ಥಾನದ ಮಹತ್ವ
ಚಿತ್ರದಲ್ಲೇ ಎರಡು ಪೆನ್‌ಗಳು ಕಾಣಿಸುತ್ತಿವೆ. ಎರಡು ಸ್ಮೂತ್ ಆಗಿ ಬರೆಯುತ್ತವೆ... ಎರಡರ ಕೆಲಸವೂ ಒಂದೇ. ಆದರೆ ಒಂದು ಪೆನ್ ₹200… ಮತ್ತೊಂದು ₹50,000. ಏಕೇ? ಇಂಕ್ ಬದಲಾವಣೆ? ಇಲ್ಲ. ಕಾರ್ಯ ಬದಲಾವಣೆ? ಬಿಲ್ಲು. ವ್ಯತ್ಯಾಸವಿದೆ ಓಪಿನಿಯನ್ನಲ್ಲಿ… ಗ್ರಹಿಕೆಯಲ್ಲಿ… ಪೋಸಿಷನಿಂಗ್ ನಲ್ಲಿ... ಕಲೆಗಾರಿಕೆಯಲ್ಲಿ... ಬ್ರ್ಯಾಂಡ್ ಮೌಲ್ಯದಲ್ಲಿ… ಮತ್ತು ಅದನ್ನು ಹಿಡಿದಾಗ ಬರುವ ಭಾವನೆಗಳಲ್ಲಿ… ₹50,000 ಪೆನ್ ಬರೆಯಲು ಖರೀದಿಸುವುದಿಲ್ಲ. ಅದನ್ನು ಸ್ಟೇಟ್ಮೆಂಟ್ ಮಾಡೋಕೆ, ತನಿಖೆಯ ಗುರುತು ತೋರಿಸೋಕೆ, ಸಕ್ಸಸ್ ಸಿಗ್ನಲ್ ಮಾಡೋಕೆ, ಲೈಫ್ನ ಮೈಲಿಗಲ್ಲುಗಳನ್ನು ಆಚರಿಸಲು ಮಾಡೋಕೆ ತೆಗೆದುಕೊಳ್ಳುತ್ತಾರೆ. ವ್ಯಾಪಾರವಾಗಲಿ... ಜೀವನವಾಗಲಿ... ಮೌಲ್ಯ ಯಾವಾಗಲೂ ಉಪಯುಕ್ತತೆ ಅಂದರೆ "ಬಳಕೆ"ಯಿಂದ ಮಾತ್ರ ಬರೋದಿಲ್ಲ. ಅದು ಕಥೆಯಿಂದ, ಭಾವನೆಗಳಿಂದ, ನಂಬಿಕೆಯಿಂದ, ವಿಶ್ವಾಸದಿಂದ ಬರುತ್ತದೆ. ಆದಕ್ಕೆ “ನಾನು ಸಸ್ತಾ ಆಗೋದು ಹೇಗೆ?” ಎಂದು ಕೇಳಬೇಡಿ. "ನಾನು ಮೌಲ್ಯ ಹೆಚ್ಚಿಸೋದು ಹೇಗೆ?" ಎಂದು ಕೇಳಿ. ಏಕೆಂದರೆ ಜನರ ಉತ್ಪನ್ನಕ್ಕೆ ಹಣ ಕೊಡುವುದಲ್ಲ ಉತ್ಪನ್ನದ ಹಿಂದಿರುವ ಕಥೆಗೂ... ಅದರ ಜೊತೆ ಬರುವ ಭಾವನೆಗೂ ಬೆಲೆ ಕೊಡುತ್ತಾರೆ. 👉 ಬೆಲೆಯನ್ನ ಅಲ್ಲ... ಮೌಲ್ಯವನ್ನ ಕಟ್ಟಿರಿ.