ಪೋಸ್ಟ್‌ಗಳು

ಆಗಸ್ಟ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸೂಕ್ತ ಸ್ಥಳದಲ್ಲಿ ಮಾತ್ರ ನಮ್ಮ ನಿಜವಾದ ಮೌಲ್ಯ ಹೊರಹೊಮ್ಮುತ್ತದೆ

 ವಯಸ್ಸಾಗಿ ಹಾಸಿಗೆ ಹಿಡಿದಿದ್ದ ತಂದೆ ತನ್ನ ಮಗಳನ್ನು ಕರೆದು "ಮಗಳೇ, ನಾನು ನಿನ್ನನ್ನು ಕಷ್ಟಪಟ್ಟು ಓದಿಸಿ ವಿದ್ಯಾವಂತೆ ಮಾಡಿದೆ. ನಾನು ಸತ್ತರೆ ನಿನ್ನ ಜೀವನಕ್ಕಾಗಿ ಯಾವ ಆಸ್ತಿಯನ್ನೂ ಮಾಡಲಿಲ್ಲ. ದುಡಿದ ಹಣವೆಲ್ಲಾ ನಿನ್ನನ್ನು ಓದಿಸಲು ಖರ್ಚಾಯಿತು. ಆದರೆ ನನ್ನ ಬಳಿ ಉಳಿದದ್ದು ಮಾತ್ರ ಮನೆಯ ಹೊರಗೆ ಮೂಲೆಯಲ್ಲಿ ನಾನು ನಿಲ್ಲಿಸಿರುವ ಆ ಹಳೆಯ ಕಾರು ಮಾತ್ರ. ಅದು ಸ್ವಲ್ಪ ಹಳೆಯದ್ದು. ನೀನು ಅದನ್ನು ಮಾರಾಟ ಮಾಡುವ ಮೊದಲು ಆ ಕಾರನ್ನು ತೆಗೆದುಕೊಂಡು ಹೋಗಿ ಹೊರಗೆ ಜನರಿಗೆ ನೀನು ಆ ಕಾರನ್ನು ಮಾರಲು ತಂದಿರುವುದಾಗಿ ಹೇಳು. ನೋಡೋಣ ಜನರು ಆ ಕಾರಿಗೆ ಎಷ್ಟು ಬೆಲೆ ಕಟ್ಟುತ್ತಾರೆ?" ಎಂದು ತಂದೆ ಮಗಳಿಗೆ ಹೇಳಿದ. ತಂದೆಯ ಮಾತಿನಂತೆ ಆ‌ ಹಳೆಯ ಕಾರನ್ನು ತೆಗೆದುಕೊಂಡು ಮಗಳು ಪೇಟೆಗೆ ಬಂದಳು. ಹಳೆಯ ಕಾರುಗಳ ಡೀಲರುಗಳು ಎಲ್ಲಿದ್ದಾರೆ ಎಂದು ವಿಚಾರಿಸುತ್ತಾ ಒಬ್ಬ ಕಾರ್ ಡೀಲರ್ ಬಳಿಗೆ ಬಂದು, ತನ್ನ ತಂದೆಯ ಆ ಹಳೆಯ ಕಾರಿನ ಈಗಿನ ಬೆಲೆಯನ್ನು ವಿಚಾರಿಸಿ, ಮನೆಗೆ ವಾಪಸ್ ಬಂದಳು. "ಅಪ್ಪಾ, ಒಬ್ಬ ಹಳೆಯ ಕಾರ್ ಡೀಲರ್ ನಮ್ಮ ಕಾರನ್ನು ನೋಡಿ ಇದು ತುಂಬಾ ಹಳೆಯ ಕಾರಿನಿಂತೆ ಕಾಣುತ್ತಿದೆ. ಹಾಗಾಗಿ 50 ಸಾವಿರ ರೂಪಾಯಿಗೆ ನಮ್ಮ ಕಾರನ್ನು ಕೊಳ್ಳುವುದಾಗಿ ಹೇಳಿದ" ಎಂದಳು. ಸರಿ, "ಈಗ ಈ ಕಾರನ್ನು ಪೇಟೆಯಲ್ಲಿ ನಾವು ಕಿರಾಣಿ ಸಾಮಾನುಗಳನ್ನು ತರುವ ಆ ಅಂಗಡಿಯ ಮಾಲೀಕನಿಗೆ ತೋರಿಸಿ, ಅಪ್ಪ ಈ ಕಾರನ್ನು ಮಾರಲು ಹೇಳಿದ್ದಾರೆ, ನೀವು ಕೊ...